ವಾರಾಂತ್ಯದ ಮದ್ಯಾಹ್ನದ ಊಟಕ್ಕೆ ಅಥವಾ ರಾತ್ರಿಯೂಟಕ್ಕೆ ಹೇಳಿ ಮಾಡಿಸಿದಂತಹಾ ಒಂದು ಬಾತ್ ಎಂದರೆ ಈ ಘೀ ರೈಸ್. ಇದಕ್ಕೆ ವೆಜಿಟೆಬಲ್ ಕೂರ್ಮ ಇದ್ದರೆ ಮಾತ್ರ ಇದು ಒಂದು ಪರಿಪೂರ್ಣ ಬಾತ್ ಎನಿಸಿಕೊಳ್ಳುತ್ತದೆ. ಘೀ ರೈಸ್ ಗೆ ಉಪಯೋಗಿಸುವ ತುಪ್ಪ, ವೆಜಿಟೆಬಲ್ ಕೂರ್ಮಕ್ಕೆ ಉಪಯೋಗಿಸುವ ತರಕಾರಿಗಳು, ಪುದೀನ-ಕೊತ್ತುಂಬರಿ ಸೊಪ್ಪು, ಶುಂಠಿ, ಬೆಳ್ಳಿಳ್ಳಿ- ಎಲ್ಲವೂ ಆರೋಗ್ಯಯುಕ್ತವಾದುದು.

ನಮ್ಮ ಭಾರತ ದೇಶದ ಬೇರೆ ಬೇರೆ ರಾಜ್ಯಗಳಲ್ಲಷ್ಟೇ ಅಲ್ಲ, ಏಷ್ಯಾ ಖಂಡದ ಇತರ ಕೆಲ ದೇಶಗಳಲ್ಲೂ ಈ ಘೀ ರೈಸ್‍ನ್ನು ಮಾಡುವುದಿದೆ. ನಮ್ಮ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ರೀತಿಯಾಗಿ ಇದನ್ನು ಮಾಡುವ ಕ್ರಮವಿದೆ. ಮಸಾಲೆಗಳನ್ನು ಪುಡಿ ಮಾಡಿ ಹಾಕುವ ಕ್ರಮ ಕೆಲವೆಡೆಯಾದರೆ, ಕಾಯಿ ಹಾಲು ಹಾಕಿ ಮಾಡುವ ಕ್ರಮ ಹಲವೆಡೆ. ಘೀ ರೈಸ್‍ನ್ನು ನಮ್ಮ ರಾಜ್ಯದಲ್ಲಿ ಹೆಚ್ಚಾಗಿ ಮಾಡುವ ಕ್ರಮದಂತೆ ನಾನೀಗ ತೋರಿಸಲಿದ್ದೇನೆ. (ವೆಜಿಟೆಬಲ್ ಪಲಾವ್ ರೆಸಿಪಿಗೆ ಇಲ್ಲಿ ಕ್ಲಿಕ್ ಮಾಡಿ)

ಬೇಕಾಗುವ ಪದಾರ್ಥಗಳು:

Pic 1

ಬಾಸ್ಮತಿ ಅಕ್ಕಿ- 2 ಲೋಟ

ತುಪ್ಪ- 3 ಚಮಚ

ಈರುಳ್ಳಿ- 2 ದೊಡ್ಡದು

ದಾಲ್ಚಿನ್ನಿ- 2-3

ಲವಂಗ- 6-7

ಯಾಲಕ್ಕಿ- 4-5

ಬೆಳ್ಳುಳ್ಳಿ- 6-8 ಬೇಳೆಗಳು

ಗೋಡಂಬಿ- 8-10

ಉಪ್ಪು- ರುಚಿಗೆ ತಕ್ಕಷ್ಟು

ಪಲಾವ್ ಎಲೆ-1-2

ಮಾಡುವ ರೀತಿ:

ಬಾಸ್ಮತಿ ಅಕ್ಕಿಯನ್ನು ಎರಡು ಸಾರಿ ತೊಳೆದು ಅದರ ನೀರು ಹೋಗುವಂತೆ ಶೋಧಿಸಿಟ್ಟುಕೊಳ್ಳಿ. ಈರುಳ್ಳಿಯನ್ನು ಉದ್ದುದ್ದನೆ ಸೀಳಿಕೊಳ್ಳಿ.

Pic 2

ಸ್ಟವ್ ಹೊತ್ತಿಸಿ, ಕುಕ್ಕರ್ ಪ್ಯಾನ್ ಇಟ್ಟು ಅದಕ್ಕೆ ತುಪ್ಪ ಹಾಕಿ. ಅದು ಕಾದಾಗ ಪಲಾವ್ ಎಲೆ ಹಾಕಿ, ಗೋಡಂಬಿ ಹಾಕಿ ಒಂದು ನಿಮಿಷ ಫ್ರೈ ಮಾಡಿ. ಸ್ಟವ್ ಉರಿಯನ್ನು ಸ್ವಲ್ಪ ಸಣ್ಣ ಮಾಡಿ. ನಂತರ ದಾಲ್ಚಿನ್ನಿ, ಯಾಲಕ್ಕಿ, ಲವಂಗ ಹಾಕಿ. ನಂತರ ಬೆಳ್ಳುಳ್ಳಿ ಬೇಳೆಗಳನ್ನೂ, ಉದ್ದಕ್ಕೆ ಸೀಳಿದ ಈರುಳ್ಳಿಯನ್ನು ಹಾಕಿ ಅದರ ಹಸಿ ವಾಸನೆ ಹೋಗಿ, ಬಾಡುವವರೆಗೂ ಹುರಿಯಿರಿ.

Pic 3

ಈಗ ಅಕ್ಕಿಯನ್ನು, 4 ಲೋಟ ನೀರನ್ನು ಹಾಕಿ, (ಒಂದು ಲೋಟ ಅಕ್ಕಿಗೆ 2 ಲೋಟ ನೀರು) ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುಕ್ಕರ್ ಮುಚ್ಚುಳ ಮುಚ್ಚಿ ವೈಟ್ ಹಾಕಿ 2 ವಿಷಲ್ ಕೂಗಿಸಿ ಸ್ಟವ್ ಆರಿಸಿ.

10 ನಿಮಿಷದ ನಂತರ ಕುಕ್ಕರ್ ಮುಚ್ಚಳ ತೆಗೆದರೆ ಘಮ ಘಮ ಎನ್ನುವ ಘೀ ರೈಸ್ ಸಿದ್ಧ. ವೆಜಿಟೆಬಲ್ ಕೂರ್ಮದೊಂದಿಗೆ ಸವಿಯಲು ಕೊಡಿ.

Pic 4

Advertisements