ಸಸ್ಯಾಹಾರಿಗಳಿಗೆ ತರಕಾರಿಗಳನ್ನು ಯಾವ ರೂಪದಲ್ಲಾದರೂ ದಿನಕ್ಕೆರಡು ಬಾರಿಯಾದರೂ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದಲ್ಲವೆ? ಈ ವೆಜಿಟೆಬಲ್ ಕೂರ್ಮವನ್ನು ಮಾಡಲು ಬಂತೆಂದರೆ, ಕೇವಲ ಘೀ ರೈಸ್‍ಗೆ ಮಾತ್ರವಲ್ಲ, ಬೆಳಗಿನ ಉಪಹಾರಗಳಾದ ಚಪಾತಿ, ಪೂರಿ, ಸೆಟ್ ದೋಸೆ ಮೊದಲಾದುವುಗಳಿಗೆ ನೆಂಚಿಕೊಳ್ಳಲು ಸೂಕ್ತವಾಗಿರುತ್ತದೆ. (ಸಾಗು ರೆಸಿಪಿಗೆ ಇಲ್ಲಿ ಕ್ಲಿಕ್ ಮಾಡಿ)

ಬೇಕಾಗುವ ಪದಾರ್ಥಗಳು:

ಬೀನ್ಸ್- 100-150 ಗ್ರಾಂ,

ಕ್ಯಾರೆಟ್- 1-2,

ಆಲುಗೆಡ್ಡೆ-1

ಬಟಾಣಿ-1ಹಿಡಿ

ಕಾಯಿ ತುರಿ-ಅರ್ಧ ಹೋಳಿಗೂ ಸ್ವಲ್ಪ ಕಡಿಮೆ

ಪುದೀನ ಸೊಪ್ಪು- ಅರ್ಧ ಕಟ್ಟು,

ಕೊತ್ತುಂಬರಿ ಸೊಪ್ಪು-ಅರ್ಧ ಕಟ್ಟು,

ಈರುಳ್ಳಿ- ಅರ್ಧ

ಹಸಿರುಮೆಣಸು- 3-4

ದಾಲ್ಚಿನ್ನಿ- 2 ಪೀಸ್,

ಯಾಲಕ್ಕಿ- 2,

ಲವಂಗ- 3-4,

ಗಸಗಸೆ- 1ಚಮಚ

ಕಾಳುಮೆಣಸು(ಪೆಪ್ಪರ್)- 5-6

ಬೆಳ್ಳುಳ್ಳಿ- 6-7 ಬೇಳೆ,

ಹಸಿ ಶುಂಠಿ-ಅರ್ಧ ಇಂಚು

ನಿಂಬೆರಸ- 1 ಚಮಚ

ಬೆಲ್ಲ- ಅರ್ಧ ಅಡಿಕೆ ಗಾತ್ರ(ಬೇಕಿದ್ದಲ್ಲಿ)

ಉಪ್ಪು- ರುಚಿಗೆ ತಕ್ಕಷ್ಟು

ಎಣ್ಣೆ- 1 ಚಮಚ

ಮಾಡುವ ವಿಧಾನ:

ಬೀನ್ಸ್, ಕ್ಯಾರೆಟ್ ನ್ನು ತೊಳೆದು ಸಣ್ಣಗೆ ಹೆಚ್ಚಿಕೊಳ್ಳಿ. ಜೊತೆಯಲ್ಲಿ ಆಲೂಗೆಡ್ಡೆ, ಬಟಾಣಿಯನ್ನು ಸೇರಿಸಿಕೊಂಡು ಸ್ವಲ್ಪ ನೀರು ಹಾಕಿ ಕುಕ್ಕರ್‍ನಲ್ಲಿಟ್ಟು ಬೇಯಿಸಿಕೊಳ್ಳಿ.

ತೆಂಗಿನ ತುರಿ, ಪುದೀನ-ಕೊತ್ತುಂಬರಿ ಸೊಪ್ಪು, ದಾಲ್ಚಿನ್ನಿ, ಲವಂಗ, ಯಾಲಕ್ಕಿ, ಗಸಗಸೆ, ಕಾಳುಮೆಣಸು, ಈರುಳ್ಳಿ, ಬೆಳ್ಳುಳ್ಳಿ, ಹಸಿಶುಂಠಿ, ಹಸಿಮೆಣಸಿನಕಾಯಿ- ಈ ಪದಾರ್ಥಗಳಿಗೆ ಸ್ವಲ್ಪ ನೀರು ಹಾಕಿಕೊಂಡು ಮಿಕ್ಸರ್ ನಲ್ಲಿ ನುಣ್ಣಗೆ ರುಬ್ಬಿಕೊಳ್ಳಿ.

Pic 1

ಈಗ ಸ್ಟವ್ ಹೊತ್ತಿಸಿ, ಫ್ರೈಯಿಂಗ್ ಪ್ಯಾನ್ ಇಟ್ಟು 1 ಚಮಚ ಎಣ್ಣೆ ಹಾಕಿ. ಅದು ಕಾದಾಗ, ಬೆಂದ ತರಕಾರಿಗಳನ್ನು ಹಾಕಿ. ನಂತರ ರುಬ್ಬಿಕೊಂಡ ಮಸಾಲೆಯನ್ನೂ, ರುಚಿಗೆ ತಕ್ಕಷ್ಟು ಉಪ್ಪು, ಬೆಲ್ಲ ಹಾಕಿ ಚೆನ್ನಾಗಿ ಕುದಿಸಿ. ಕೊನೆಯಲ್ಲಿ 1 ಚಮಚ ನಿಂಬೆ ರಸ ಹಿಂಡಿ ಸ್ಟವ್ ಆರಿಸಿ.

ಸ್ವಾದಿಷ್ಟವಾದ ವೆಜಿಟೆಬಲ್ ಕೂರ್ಮ ರೆಡಿ. ಘೀ ರೈಸ್ ನೊಂದಿಗೆ ತಿನ್ನಲು ಕೊಡಿ.

Pic 2

Advertisements