ಈಗಾಗಲೇ ರವೆ ಹಾಲುಬಾಯಿ, ರಾಗಿ ಹಾಲುಬಾಯಿಗಳನ್ನು ಹೇಗೆ ಮಾಡುವುದೆಂದು ನೋಡಿದ್ದೀರಿ. ಸಾಕಷ್ಟು ಪ್ರಮಾಣದಲ್ಲಿ ನೀರಿನಂಶವನ್ನು ಹೊಂದಿರುವ, ತಂಪು ಗುಣವನ್ನು ಹೊಂದಿ, ಬಹಳಷ್ಟು ಪ್ರಮಾಣದಲ್ಲಿ ಪೌಷ್ಟಿಕಾಂಶಗಳನ್ನು ಹೊಂದಿರುವ ಸೋರೆಕಾಯಿಯ ಆರೋಗ್ಯ ಲಾಭಗಳನ್ನು ಈ ಹಿಂದೆ ಪೋಸ್ಟ್ ಮಾಡಿರುವ ಸೋರೆಕಾಯಿ ಪಾಯಸ ಇದರ ರೆಸಿಪಿಯಲ್ಲಿ ವಿವರಿಸಲಾಗಿದೆ. ಈಗ ಈ ಹಾಲುಸೋರೆಕಾಯಿಯಿಂದ ಮಾಡುವ ಹಾಲುಬಾಯಿಯ ವಿಧಾನವು ಹೇಗೆಂದು ನೋಡೋಣವೆ?
(ಸೋರೆಕಾಯಿ ಪಾಯಸ- ಇದರ ರೆಸಿಪಿಗೆ ಇಲ್ಲಿ ಕ್ಲಿಕ್ ಮಾಡಿ)

ಬೇಕಾಗುವ ಪದಾರ್ಥಗಳು

WhatsApp Image 2019-05-03 at 10.48.54 AM

WhatsApp Image 2019-05-03 at 10.49.01 AM (2)

ಹಾಲು ಸೋರೆಕಾಯಿ- 1ಕೆ.ಜಿ.

ಸಕ್ಕರೆ- ಒಂದೂವರೆ ಲೋಟ (ಜ್ಯೂಸ್ ಲೋಟ)

ಸಪ್ಪೆ ಖೋವಾ- 200-250 ಗ್ರಾಂ

ಯಾಲಕ್ಕಿ ಪುಡಿ- ಅರ್ಧ ಚಮಚ

ತುಪ್ಪ- 5-6 ಚಮಚ

ಗೋಡಂಬಿ- ಸ್ವಲ್ಪ (ಬೇಕಿದ್ದಲ್ಲಿ)

ಬಾದಾಮಿ- ಸ್ವಲ್ಪ (ಬೇಕಿದ್ದಲ್ಲಿ, ಅಲಂಕರಿಸಲು)

ಮಾಡುವ ವಿಧಾನ:

WhatsApp Image 2019-05-03 at 10.49.01 AM (1)

ಮೊದಲು ಹಾಲು ಸೋರೆಕಾಯಿಯನ್ನು ತೊಳೆದು, ಸಿಪ್ಪೆ ತೆಗೆದು, ಹೆಚ್ಚಿಕೊಳ್ಳಿ. ಒಳಗಿನ ಬೀಜ, ತಿರುಳಿನ ಭಾಗವನ್ನು ತೆಗೆದು ಹಾಕಿ. ನಂತರ ಅದನ್ನು ಮಿಕ್ಸರ್ ಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.

ಇದನ್ನೆಲ್ಲಾ ಒಂದು ದಪ್ಪ ತಳದ ಫ್ರೈಯಿಂಗ್ ಪ್ಯಾನ್ ಗೆ ಹಾಕಿ ಮದ್ಯಮ ಉರಿಯನ್ನಿಟ್ಟು ಕೈ ಮಗುಚುತ್ತಿರಿ. ಸ್ವಲ್ಪ ಹೊತ್ತಿಗೆ ಒಂದೂವರೆ ಲೋಟಕ್ಕೂ ನಾಲ್ಕು-ಐದು ಚಮಚದಷ್ಟು ಕಡಿಮೆ ಪ್ರಮಾಣದ ಸಕ್ಕರೆಯನ್ನು ಹಾಕಿ.

ಈ ಸಮಯದಲ್ಲಿ ನೀವು ಗೋಡಂಬಿಯನ್ನು ಸಣ್ಣದಾಗಿ ಕತ್ತರಿಸಿಕೊಳ್ಳಿ. ಬಾದಾಮಿಯನ್ನು ಉದ್ದುದ್ದನೆ ಕತ್ತರಿಸಿಡಿ. ಯಾಲಕ್ಕಿಯನ್ನು ಪುಡಿ ಮಾಡಿಕೊಳ್ಳಿ. ಹಾಗೇ ಒಂದು ತಟ್ಟೆಗೆ 3-4 ಹನಿ ತುಪ್ಪವನ್ನು ಹಾಕಿ ಸವರಿಡಿ.

WhatsApp Image 2019-05-03 at 10.49.01 AM

ಖೊವಾವು ಫ್ರಿಜ್ ನಲ್ಲಿಟ್ಟು ಗಟ್ಟಿಯಾಗಿದ್ದರೆ ಅದನ್ನು ತುರಿದಿಡಿ. ಇಲ್ಲವಾದಲ್ಲಿ ಕೈಯಲ್ಲಿ ಸಣ್ಣ ಪುಡಿ ಮಾಡಿಡಿ.

ಹಾಲು ಸೋರೆಕಾಯಿಯಲ್ಲಿರುವ ನೀರಿನ ಪ್ರಮಾಣವೆಲ್ಲಾ ಹೋಗಿ ಮಿಶ್ರಣವು ಸ್ವಲ್ಪ ಗಟ್ಟಿಯಾದಾಗ ತುರಿದ ಅಥವಾ ಕೈಯಲ್ಲಿ ಪುಡಿ ಮಾಡಿದ ಖೋವಾವನ್ನು, ಗೋಡಂಬಿ ಚೂರುಗಳನ್ನು (ಬೇಕಿದ್ದಲ್ಲಿ) ಪ್ಯಾನ್ ಗೆ ಹಾಕಿ ಕೈ ಮಗುಚಿ.

WhatsApp Image 2019-05-03 at 10.49.00 AM

ಮಿಶ್ರಣವು ಇನ್ನೂ ಸ್ವಲ್ಪ ಗಟ್ಟಿಯಾಗುತ್ತಾ ಬರುತ್ತದೆ. ಇನ್ನು ಇದನ್ನು ತುಪ್ಪ ಸವರಿದ ತಟ್ಟೆಗೆ ಹಾಕಬಹುದೇನೋ ಎನಿಸಿದಾಗ ಅದರ ಹದವನ್ನು ಪರೀಕ್ಷಿಸಲು, ಒಂದು ಕಡಲೆಕಾಯಿ ಗಾತ್ರದಷ್ಟು ಪ್ರಮಾಣದ ಮಿಶ್ರಣವನ್ನು ಪ್ಯಾನ್ ನಿಂದ ಹೊರ ತೆಗೆಯಿರಿ. ಮತ್ತೆರಡು ನಿಮಿಷಕ್ಕೆ ಅದು ಕೈಯಲ್ಲಿ ಉಂಡೆ ಕಟ್ಟಿದಾಗ ಸ್ವಲ್ಪ ಗಟ್ಟಿಯಾಗಿರುತ್ತದೆ. ಆಗ ಅದು ಸರಿಯಾದ ಹದದಲ್ಲಿದೆ, ತುಪ್ಪ ಸವರಿದ ತಟ್ಟೆಗೆ ಹಾಕಬಹುದು ಎಂದು ತಿಳಿದು, ಮೊದಲೇ ತುಪ್ಪ ಸವರಿಟ್ಟ ತಟ್ಟೆಗೆ ಹಾಕಿ, ಮೇಲ್ಭಾಗವನ್ನು ಒಂದೇ ಸಮನೆ ಮಾಡಿ.

WhatsApp Image 2019-05-03 at 10.49.00 AM (1)

WhatsApp Image 2019-05-03 at 10.49.00 AM (2)

WhatsApp Image 2019-05-03 at 10.49.01 AM (3)

ನಂತರ ಅದಕ್ಕೆ ಉದ್ದುದ್ದನೆ ಸೀಳಿದ ಬಾದಾಮಿ ಚೂರುಗಳನ್ನು ಮೇಲ್ಭಾಗಕ್ಕೆ ಬರುವಂತೆ ಹರಡಿ ಒಂದು ಸಟ್ಟುಗದಿಂದ ಸ್ವಲ್ಪ ಒತ್ತಿರಿ. ಅರ್ಧ ಗಂಟೆಯ ನಂತರ ನಿಮಗಿಷ್ಟವಾದ ಆಕಾರದಲ್ಲಿ, ಕತ್ತರಿಸಿ. ಆರೋಗ್ಯಕರ, ರುಚಿಕರ ಹಾಲುಸೋರೆಕಾಯಿ ಹಾಲುಬಾಯಿ ಸವಿಯಲು ಸಿದ್ಧ.

ಸೂಚನೆ:

ಮೇಲೆ ತಿಳಿಸಿದ ಪ್ರಮಾಣದಲ್ಲಿ ಪದಾರ್ಥಗಳನ್ನು ತೆಗೆದುಕೊಂಡರೆ ಸುಮಾರು 25 ಪೀಸ್ ಹಾಲುಬಾಯಿ ತಯಾರಾಗುತ್ತದೆ.