ದೇಹಕ್ಕೆ ಬಹಳ ಶಕ್ತಿಯನ್ನು ಕೊಡುವ, ಅತ್ಯಂತ ಆರೋಗ್ಯ ಲಾಭಗಳನ್ನು ಹೊಂದಿರುವ, ಬಾದಾಮಿಯಿಂದ ಸ್ವಾದಿಷ್ಟವಾಗಿರುವ ಬರ್ಫಿಯನ್ನು ಬಹಳ ಸುಲಭದಲ್ಲಿ ತಯಾರಿಸಬಹುದು. ಬನ್ನಿ ನೋಡೋಣ ಮಾಡುವ ಬಗೆಯನ್ನು.

ಬೇಕಾಗುವ ಪದಾರ್ಥಗಳು:

Badam Burfy Ingredients

ಬಾದಾಮಿ- 1 ಲೋಟ (ಮೀಡಿಯಂ ಅಳತೆಯ ಲೋಟ)

ಪುಡಿ ಸಕ್ಕರೆ- 1 ಲೋಟ

ಹಾಲು- ಅರ್ಧ ಲೋಟ

ತುಪ್ಪ- 2 ಚಮಚ

ಕೇಸರಿದಳ- 10-12

ಮಾಡುವ ವಿಧಾನ:

ಒಂದೆರಡು ಚಮಚ ನೀರಿಗೆ ಕೇಸರಿ ಎಸಳನ್ನು ಹಾಕಿ ನೆನೆಸಿಡಿ.

ಸ್ಟವ್ ಹೊತ್ತಿಸಿ ಒಂದು ಪಾತ್ರೆಗೆ 2 ಲೋಟ ನೀರು ಹಾಕಿ ಕುದಿಯಲು ಇಡಿ. ಕುದಿಯುತ್ತಿರುವಾಗ ಸ್ಟವ್ ಆರಿಸಿ ಅಳೆದಿಟ್ಟ ಬಾದಾಮಿಗಳನ್ನು ಅದಕ್ಕೆ ಹಾಕಿ ಒಂದು ಮುಚ್ಚಳವನ್ನು ಮುಚ್ಚಿ 5 ನಿಮಿಷಗಳ ಕಾಲ ಹಾಗೇ ಇಡಿ.

Badam Burfy boil n soak

5 ನಿಮಿಷಗಳ ನಂತರ ಬಾದಾಮಿಗಳನ್ನೆಲ್ಲಾ ತೆಗೆದು ಒಂದು ತಣ್ಣೀರಿನ ಪಾತ್ರೆಗೆ ಹಾಕಿ, ಕೈಯಲ್ಲಿ ಒತ್ತಿ ಅದರ ಸಿಪ್ಪೆ ತೆಗೆಯಿರಿ. ಬಿಸಿನೀರಲ್ಲಿ ನೆನೆಸಿದ್ದರಿಂದ ಬಹಳ ಬೇಗ ಸಿಪ್ಪೆ ತೆಗೆಯಲು ಬರುತ್ತದೆ.

Badam Burfy peeled badams

ಮತ್ತೆ ಸ್ವಲ್ಪ ನೀರನ್ನು ಕುದಿಸಿ ಸ್ಟವ್ ಆರಿಸಿ. ಆ ಬಿಸಿ ನೀರಿಗೆ ಸಿಪ್ಪೆ ತೆಗೆದ ಬಾದಾಮಿಗಳನ್ನು ಹಾಕಿ ಒಂದು ಮುಚ್ಚಳ ಮುಚ್ಚಿಡಿ. ಸುಮಾರು ಒಂದು ಗಂಟೆಗಳ ಕಾಲ ಅದೇ ನೀರಿನಲ್ಲಿ ಬಾದಾಮಿಗಳು ನೆನೆಯಲಿ.

Badam Burfy peeled soak

ಒಂದು ಗಂಟೆಗಳ ನಂತರ ಆ ಬಾದಾಮಿಗಳನ್ನು, ನೆನೆಸಿಟ್ಟ ಕೇಸರಿ ಹಾಲನ್ನು ಹಾಗೇ ಅಳೆದಿಟ್ಟ ಅರ್ಧ ಲೋಟ ಹಾಲನ್ನು ಮಿಕ್ಸರ್ ಜಾರ್ ಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. 4-5 ಚಮಚ ನೀರಿನಲ್ಲಿ ಜಾರ್ ನ್ನು ತೊಳದುಕೊಳ್ಳಿ.

ಸ್ಟವ್ ಹೊತ್ತಿಸಿ, ಒಂದು ದಪ್ಪ ತಳದ ಫ್ರೈಯಿಂಗ್ ಪ್ಯಾನ್ ಗೆ 2 ಚಮಚ ತುಪ್ಪ ಹಾಕಿ, ರುಬ್ಬಿದ ಮಿಶ್ರಣವನ್ನೂ ಹಾಕಿ ಕೈ ಮಗುಚುತ್ತಿರಿ. ಮಧ್ಯಮ ಉರಿಯಿರಲಿ.

Badam Burfy stir pan

ಸುಮಾರು 8-10 ನಿಮಿಷಗಳ ನಂತರ ಮಿಶ್ರಣವು ಒಂದು ಮುದ್ದೆಯಂತಾದಾಗ ಸ್ಟವ್ ಆರಿಸಿ ಅದನ್ನು ಒಂದು ತುಪ್ಪ ಸವರಿದ ತಟ್ಟೆಗೆ ಹಾಕಿ ಒಂದೇ ಸಮನೆ ಬರುವಂತೆ ಸಟ್ಟುಗದಿಂದ ಹರಡಿ.

Badam Burfy Plate

ತಣಿದ ನಂತರ ಬೇಕಾದ ಆಕಾರದಲ್ಲಿ ಕತ್ತರಿಸಿ. ಸ್ವಾದಿಷ್ಟವಾದ, ಆರೋಗ್ಯಕರವಾದ ಬಾದಾಮಿ ಬರ್ಫಿ ಸವಿಯಲು ಸಿದ್ಧ.

ಮೇಲಿನ ಪ್ರಮಾಣದಲ್ಲಿ ಪದಾರ್ಥಗಳನ್ನು ತೆಗೆದುಕೊಂಡಲ್ಲಿ ಸುಮಾರು 20-22 ಪೀಸ್ ಬರ್ಫಿಗಳಾಗುತ್ತವೆ.