ವಿಟಮಿನ್, ಪ್ರೊಟೀನ್ ಗಳ ಆಗರವಾದ ಬಾದಾಮಿ, ಗೋಡಂಬಿ, ಉತ್ತುತ್ತೆ, ಒಣದ್ರಾಕ್ಷಿ, ವಾಲ್ನಟ್ ಮುಂತಾದ ಡ್ರೈಫ್ರೂಟ್ಸ್ ತಿನ್ನಲು ರುಚಿಕರವಷ್ಟೇ ಅಲ್ಲ. ಇವುಗಳ ಉಪಯೋಗದಿಂದ ನಾನಾ ರೀತಿಯ ಆರೋಗ್ಯ ಲಾಭಗಳಿವೆ. ಇವುಗಳನ್ನು ದಿನ ನಿತ್ಯ ಉಪಯೋಗಿಸುವುದರಿಂದ ರೋಗ ನಿರೋದಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಮಿನರಲ್ಸ್, ಪ್ರೊಟೀನ್, ಫೈಬರ್ ಸಮೃದ್ಧವಾದ ಡ್ರೈಫ್ರೂಟ್ಸ್ ಸೇವಿಸುವುದರಿಂದ ದೇಹದ ಮೂಳೆ, ಮಾಂಸಖಂಡ, ನರಗಳನ್ನು ಸುಸ್ಥಿತಿಯಲ್ಲಿಡಬಹುದು. ರಕ್ತ ಹೀನತೆಯನ್ನು ನಿವಾರಿಸಿ, ದೃಷ್ಟಿ ದೋಷಗಳನ್ನು ಹೋಗಲಾಡಿಸಿ, ದೇಹದ ತೂಕವನ್ನು, ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಿ, ನಮ್ಮನ್ನು ಸಧೃಡಕಾಯರನ್ನಾಗಿ ಮಾಡುವುದರಲ್ಲಿ ಈ ಡ್ರೈಫ್ರೂಟ್ಸ್ ಪಾತ್ರ ಅಧಿಕವಾಗಿದೆ.

ದಿನಕ್ಕೊಂದು ಹಿಡಿಯಷ್ಟಾದರೂ ಡ್ರೈಫ್ರೂಟ್ಸ್ ಉಪಯೋಗಿಸಬೇಕೆಂದು ಆಹಾರ ತಜ್ನರು ಹೇಳುತ್ತಾರೆ. ಬನ್ನಿ ಕೆಲಬಗೆಯ ಡ್ರೈಫ್ರೂಟ್ಸ್ ಬಳಸಿ ಡ್ರೈಫ್ರೂಟ್ಸ್ ಲಡ್ಡು ತಯಾರು ಮಾಡುವ ಬಗೆಯನ್ನು ನೋಡೋಣ.

ಬೇಕಾಗುವ ಪದಾರ್ಥಗಳು:

Dryfruits laddu 1 clg

Dryfruits laddu bella kobri

ಬಾದಾಮಿ- 1 ಲೋಟ

ಗೋಡಂಬಿ- 1 ಲೋಟ

ಉತ್ತುತ್ತೆ- 1 ಲೋಟ

ಒಣದ್ರಾಕ್ಷಿ- 1 ಲೋಟ

ಒಣ ಕೊಬ್ಬರಿ- ಅರ್ಧ ಲೋಟ

ಪುಡಿಬೆಲ್ಲ- ಒಂದೂವರೆ ಲೋಟ

ಮಾಡುವ ವಿಧಾನ:

ಮೊದಲು ಬಾದಾಮಿ, ಉತ್ತುತ್ತೆ, ಗೋಡಂಬಿಗಳನ್ನು ಸಣ್ಣ ಚೂರುಗಳನ್ನಾಗಿ ಕತ್ತರಿಸಿಕೊಂಡು ಅವನ್ನೆಲ್ಲಾ ಒಂದು ಪಾತ್ರೆಗೆ ಹಾಕಿ. ಅದಕ್ಕೆ ಒಣದ್ರಾಕ್ಷಿಯನ್ನು ಮತ್ತು ಕೊಬ್ಬರಿ ತುರಿಯನ್ನು ಸೇರಿಸಿ ಮಿಶ್ರ ಮಾಡಿಡಿ.

Dry fruits laddu all mix

ಈಗ ಸ್ಟವ್ ಹೊತ್ತಿಸಿ, ಫ್ರೈಯಿಂಗ್ ಪ್ಯಾನ್ ಲ್ಲಿ ಅರ್ಧ ಲೋಟದಷ್ಟು ನೀರು ಹಾಕಿ ಪುಡಿ ಮಾಡಿದ ಬೆಲ್ಲವನ್ನು ಹಾಕಿ ಕುದಿಯಲು ಇಡಿ. ಬೆಲ್ಲವು ಕರಗಿ ಹರಳು ಪಾಕದಷ್ಟು ಹದ ಬಂದಾಗ ಸ್ಟವ್ ಆರಿಸಿ. ( ಒಂದು ಸಣ್ಣ ತಟ್ಟೆಗೆ 2 ಚಮಚ ನೀರನ್ನು ಹಾಕಿ, ಆ ನೀರಿಗೆ ಬೆಲ್ಲದ ಪಾಕವನ್ನು ಹಾಕಿ ಅದನ್ನು ಒಟ್ಟು ಮಾಡಿದಾಗ ಹರಳಿನಂತೆÉ ಕಾಣುವುದೇ ಹರಳು ಪಾಕ).

Dry fruits laddu Paaka

ಈಗ ಮೊದಲು ಮಿಶ್ರ ಮಾಡಿಟ್ಟ ಪಾತ್ರೆಯಿಂದ ಸ್ವಲ್ಪ ಭಾಗವನ್ನು ಬೇರೊಂದು ಬೇಸಿನ್ ಗೆ ಹಾಕಿಕೊಂಡು ಅದಕ್ಕೆ ಮೇಲಿನ ಬೆಲ್ಲದ ಪಾಕವನ್ನು ಸ್ವಲ್ಪವೇ ಹಾಕಿಕೊಂಡು ಬಿಸಿ ಇರುವಾಗಲೆ ಉಂಡೆ ಮಾಡಿ.

ಮತ್ತೆ ಇನ್ನೊಮ್ಮೆ ಮಿಶ್ರ ಮಾಡಿದ ಭಾಗವನ್ನು ಬೇಸಿನ್ ಗೆ ಹಾಕಿಕೊಂಡು ಬೆಲ್ಲದ ಪಾಕವನ್ನು ಇನ್ನೂ ಸ್ವಲ್ಪ ಬಿಸಿ ಮಾಡಿ ಆ ಮಿಶ್ರಣಕ್ಕೆ ಹಾಕಿಕೊಂಡು ಉಂಡೆ ಮಾಡಿ. ರುಚಿಕರ, ಆರೋಗ್ಯಕರ ಡ್ರೈಫ್ರೂಟ್ಸ್ ಲಡ್ಡು ಸಿದ್ಧ.

ಗಾಳಿಯಾಡದ ಡಬ್ಬದಲ್ಲಿ ಇದನ್ನು ಹಾಕಿಟ್ಟರೆ ಒಂದು ತಿಂಗಳವರೆಗೂ ಕೆಡದೆ ಇರುತ್ತದೆ.